MS Dhoni 2008ರಲ್ಲೇ ನಾಯಕತ್ವವನ್ನು ತೊರೆಯುವುದಾಗಿ ಹೇಳಿದ್ರಾ?

2008 ರಲ್ಲಿ ಧೋನಿ ನಾಯಕತ್ವವನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ. ಆಗಿನ ವರದಿಗಳ ಪ್ರಕಾರ ಆಯ್ಕೆ ಸಮಿತಿಯ ಸಭೆಯ ಬಗ್ಗೆ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗಿತ್ತು.

Written by - Yashaswini V | Last Updated : Jun 10, 2021, 08:08 AM IST
  • ಆರ್‌ಪಿ ಸಿಂಗ್ ಸಂದರ್ಶನವೊಂದರಲ್ಲಿ ಈ ವಿಷಯದ ಸಂಪೂರ್ಣ ಸತ್ಯಾಸತ್ಯತೆಯನ್ನು ತಿಳಿಸಿದ್ದಾರೆ
  • ಟೀಂ ಇಂಡಿಯಾ ನಾಯಕರಾಗಿ ಧೋನಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿದ್ದಾರೆ
  • ಧೋನಿ ಭಾರತ ತಂಡಕ್ಕೆ ಹಲವು ಐತಿಹಾಸಿಕ ಕ್ಷಣಗಳನ್ನು ನೀಡಿದರು
MS Dhoni 2008ರಲ್ಲೇ ನಾಯಕತ್ವವನ್ನು ತೊರೆಯುವುದಾಗಿ ಹೇಳಿದ್ರಾ?  title=
2008 ರಲ್ಲಿ ಧೋನಿ ನಾಯಕತ್ವವನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ರಾ?

ನವದೆಹಲಿ: ಮಹೇಂದ್ರ ಸಿಂಗ್ ಧೋನಿ  (Mahendra Singh Dhoni) 2007 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಧೋನಿ ತಂಡದ ನಾಯಕತ್ವವನ್ನು ವಹಿಸಿಕೊಂಡಾಗ ಅವರಿಗೆ ಅನೇಕ ಸವಾಲುಗಳು ಎದುರಾಗಿದ್ದವು. ಅವುಗಳಲ್ಲಿ ಯುವಕರಿಗೆ ಅವಕಾಶಗಳನ್ನು ನೀಡುವುದು ಮತ್ತು ಭವಿಷ್ಯಕ್ಕಾಗಿ ತಂಡವನ್ನು ನಿರ್ಮಿಸುವುದು ಮುಖ್ಯವಾದ ಸವಾಲಾಗಿತ್ತು. ಆ ಎಲ್ಲ ಸವಾಲುಗಳನ್ನು ಎದುರಿಸುತ್ತಾ ಧೋನಿ ಭಾರತ ತಂಡಕ್ಕೆ ಅನೇಕ ಐತಿಹಾಸಿಕ ಕ್ಷಣಗಳನ್ನು ನೀಡಿದರು.

ಧೋನಿ ನಾಯಕತ್ವವನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ರಾ?
2008 ರಲ್ಲಿ ಎಂ.ಎಸ್. ಧೋನಿ (MS Dhoni) ನಾಯಕತ್ವವನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ. ಆಗ ಬಂದ ವರದಿಗಳ ಪ್ರಕಾರ ಆಯ್ಕೆ ಸಮಿತಿಯ ಸಭೆಯ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗಿತ್ತು. ವರದಿಗಳ ಪ್ರಕಾರ, ಆರ್.ಪಿ.ಸಿಂಗ್ ಬದಲಿಗೆ ಇರ್ಫಾನ್ ಪಠಾಣ್ ಅವರನ್ನು ತಂಡಕ್ಕೆ ಸೇರಿಸಿಕೊಂಡರೆ ನಾಯಕತ್ವವನ್ನು ತೊರೆಯುವುದಾಗಿ ಧೋನಿ ಆಯ್ಕೆದಾರರಿಗೆ ಬೆದರಿಕೆ ಹಾಕಿದ್ದರಂತೆ. 2008 ರಲ್ಲಿ, ಮಾಧ್ಯಮ ವರದಿಯಲ್ಲಿ ಆರ್.ಪಿ. ಸಿಂಗ್ ಬದಲಿಗೆ ಇರ್ಫಾನ್ ಪಠಾಣ್ ಅವರ ಆಯ್ಕೆಯ ಬಗ್ಗೆ ಧೋನಿಗೆ ಸಮ್ಮತಿ ಇರಲಿಲ್ಲ ಎಂದು ತಿಳಿದುಬಂದಿದೆ. ಆರ್.ಪಿ.ಸಿಂಗ್ ಬದಲಿಗೆ ಇರ್ಫಾನ್ ಪಠಾಣ್ ಅವರನ್ನು ಆಯ್ಕೆ ಮಾಡಲು ಆಯ್ಕೆದಾರರು ಕೇಳಿದಾಗ, ಧೋನಿ ನಾಯಕತ್ವವನ್ನು ತ್ಯಜಿಸುವ ಬಗ್ಗೆ ಮಾತನಾಡಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ- Virat Kohli, Anushka Sharma ಅವರ ಐಷಾರಾಮಿ ಮನೆಯ INSIDE ಫೋಟೋಸ್

ಸಂದರ್ಶನವೊಂದರಲ್ಲಿ ಸತ್ಯ ಬಹಿರಂಗಪಡಿಸಿದ ಆರ್‌ಪಿ ಸಿಂಗ್ :
ಆರ್‌ಪಿ ಸಿಂಗ್ (RP Singh) ಸಂದರ್ಶನವೊಂದರಲ್ಲಿ ಈ ವಿಷಯದ ಸಂಪೂರ್ಣ ಸತ್ಯಾಸತ್ಯತೆಯನ್ನು ತಿಳಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ತಮ್ಮ ನಾಯಕತ್ವದಲ್ಲಿ ತಂಡವನ್ನು ಆಯ್ಕೆ ಮಾಡುವ ವಿಷಯದಲ್ಲಿ ಎಂದಿಗೂ ಪಕ್ಷಪಾತ ತೋರಲಿಲ್ಲ ಎಂದು ಆರ್.ಪಿ.ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆರ್.ಪಿ.ಸಿಂಗ್ ಅವರ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ತಂಡವನ್ನು ಆಯ್ಕೆ ಮಾಡುವಾಗ ಯಾವ ಆಟಗಾರರು ತಮಗೆ ಸ್ನೇಹಿತರು ಎಂದು ನೆನಪಿನಲ್ಲಿಡುವ ನಾಯಕನಾಗಿರಲಿಲ್ಲ ಎಂದಿದ್ದಾರೆ.

ಧೋನಿ ಭಾರತ ತಂಡಕ್ಕೆ ಹಲವು ಐತಿಹಾಸಿಕ ಕ್ಷಣಗಳನ್ನು ನೀಡಿದರು:
ಉತ್ತಮ ಆಟಗಾರರ ಆಯ್ಕೆ ವಿಷಯಕ್ಕೆ ಬಂದಾಗ ಎಂ.ಎಸ್. ಧೋನಿ ತಮ್ಮ ತಂಡಕ್ಕೆ ನ್ಯಾಯಯುತ ನಿರ್ಧಾರ ತೆಗೆದುಕೊಂಡಿದ್ದಾರೆ ಮತ್ತು ವಿಷಯ ಸೋರಿಕೆಯಾದಾಗ ಅದು ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ. 

ಇದನ್ನೂ ಓದಿ- MS Dhoni's Farm House: ಆಧುನಿಕ ಸೌಲಭ್ಯಗಳಿಂದ ತುಂಬಿರುವ ಧೋನಿಯ ತೋಟದ ಮನೆಯ ಕಾಣದ ಚಿತ್ರಗಳು

ಧೋನಿ ನಾಯಕತ್ವದಲ್ಲಿ ಭಾರತ ಐಸಿಸಿ ವಿಶ್ವ ಟಿ 20 (2007), ಕ್ರಿಕೆಟ್ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಪ್ರಶಸ್ತಿಯನ್ನು ಗೆದ್ದಿದೆ. ಇದಲ್ಲದೆ ಭಾರತ 2009 ರಲ್ಲಿ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News